ಗಂಗಾವತರಣ-ಅಂಬಿಕಾತನಯದತ್ತ ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||೧ಹರನ ಜಡೆಯಿಂದ ಹರಿಯ ಅಡಿಯಿಂದಋಶಿಯ ತೊಡೆಯಿಂದ ನುಸುಳಿ ಬಾ;ದೇವದೇವರನು ತಣಿಸಿ ಬಾದಿಗ್ದಿಗಂತದಲಿ ಹಣಿಸಿ ಬಾಚರಾಚರಗಳಿಗೆ ಉಣಿಸಿ ಬಾಇಳಿದು ಬಾ ತಾಯಿ ಇಳಿದು ಬಾ.೨ನಿನಗೆ ಪೊಡಮಡುವೆ ನಿನ್ನನುಡುತೊಡುವೆಏಕೆ ಎಡೆತಡೆವೆ ಸುರಿದು ಬಾಸ್ವರ್ಗ ತೊರೆದು ಬಾಬಯಲ ಜರೆದು ಬಾನೆಲದಿ ಹರಿದು ಬಾಬಾರೆ ಬಾ ತಾಯಿ ಇಳಿದು ಬಾಇಳಿದು ಬಾ ತಾಯೇ ಇಳಿದು ಬಾ.೩ನನ್ನ ತಲೆಯೊಳಗೆನನ್ನ ಬೆಂಬಳಿಗೆನನ್ನ ಒಳಕೆಳಗೆ ನುಗ್ಗಿ ಬಾ,ಕಣ್ಣ ಕಣ ತೊಳಿಸಿಉಸಿರ ಎಲೆ ಎಳಸಿನುಡಿಯ ಸಸಿ ಮೊಳಸಿಹಿಗ್ಗಿ ಬಾ;ಎದೆಯ ನೆಲೆಯಲ್ಲಿ ನೆಲೆಸಿ ಬಾಜೀವ ಜಲದಲ್ಲಿ ಚಲಿಸಿ ಬಾಮೂಲ ಹೊಲದಲ್ಲಿ ನೆಲೆಸಿ ಬಾಇಳಿದು ಬಾ ತಾಯೇ ಇಳಿದು ಬಾ.೪ಕಂಚು ಮಿಂಚಾಗಿ ತೆರಳಿ ಬಾನೀರು ನೀರಾಗಿ ಉರುಳಿ ಬಾಮತ್ತೆ ಹೊಡೆಮರಳಿ ಬಾ,ದಯೆಯಿರದ ದೀನಹರೆಯಳಿದ ಹೀನನೀರಿರದ ಮೀನ ಕರೆಕರೆವ ಬಾಇಳಿದು ಬಾ ತಾಯೇ ಇಳಿದು ಬಾ.೫ಕರು ಕಂಡ ಕರುಳೆಮನ ಉಂಡ ಮರುಳೆಉದ್ದಂಡ ಅರುಳೆಸುಳಿಸುಳಿದು ಬಾ;ಶಿವಶುಭ್ರ ಕರುಣೆಅತಿಕಿಂಚದರುಣೆವಾತ್ಸಲ್ಯವರಣೆಇಳಿ ಇಳಿದು ಬಾಇಳಿದು ಬಾ ತಾಯೇ ಇಳಿದು ಬಾ.೬ಕೊಳೆಯ ತೊಳೆವವರು ಇಲ್ಲ ಬಾಬೇರೆ ಶಕ್ತಿಗಳ ಹೊಲ್ಲ ಬಾಹೀಗೆ ಮಾಡಿದರು ಅಲ್ಲ ಬಾನಾಡಿ ನಾಡಿಯನು ತುತ್ತ ಬಾನಮ್ಮ ನಾಡನ್ನೆ ಸುತ್ತ ಬಾಸತ್ತ ಜನರನು ಎತ್ತ ಬಾ.ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?೭ಹರಕೆ ಸಂದಂತೆಮಮತೆ ಮಿಂದಂತೆತುಂಬಿ ಬಂದಂತೆ ದುಮ್ ದುಮ್ ಎಂದಂತೆ ದುಡುಕಿ ಬಾನಿನ್ನ ಕಂದನ್ನ ಹುಡುಕಿ ಬಾಹುಡುಕಿ ಬಾ ತಾಯೆ ದುಡುಕಿ ಬಾ ಇಳಿದು ಬಾ ತಾಯಿ ಇಳಿದು ಬಾ೮ಹರಣ ಹೊಸದಾಗಿ ಹೊಳೆದು ಬಾಬಾಳುಬೆಳಕಾಗೆ ಬೆಳೆದು ಬಾಕೈ ತೊಳೆದು ಬಾಮೈ ತಳೆದು ಬಾಇಳೆಗಿಳಿದು ಬಾ ತಾಯಿ ಇಳಿದು ಬಾಇಳಿದು ಬಾ ತಾಯೇ ಇಳಿದು ಬಾ.೯ಶಂಭು ಶಿವಹರನ ಚಿತ್ತೆ ಬಾದತ್ತ ನರಹರಿಯ ಮುತ್ತೆ ಬಾಅಂಬಿಕಾತನಯನತ್ತೆ ಬಾಇಳಿದು ಬಾ ತಾಯಿ ಇಳಿದು ಬಾಶುಕ್ರವಾರ ೨೪-೭-೧೯೪೨( ಆ. ಎಕಾದಶಿ )ಭಾವ: ಗಂಗಾವತರಣಕ್ಕೆ ನಿಮಿತ್ತ ಮಾತ್ರವಾದದ್ದು ಬಂಗಾಲದೊಳಗಿನ ಬರಗಾಲದ ರೌದ್ರಪ್ರಸಂಗ ,ಅವ್ಯಜಕರುಣೆಯ ನಿರಂತರ ಅವತಾರ ಈ ಗಂಗಾಸ್ತೋತ್ರ ಎಂಬ ಸ್ತಾಯೀ ಭಾವದಲ್ಲಿ ಈ ಕವನದ ಉಗಮವಿದೆ.